ಗೃಹಸಚಿವರ ತವರಲ್ಲಿ ಹಪ್ಪಳದಂತೆ ಎದ್ದು ಬಂದ ರಸ್ತೆ
ಗೃಹಸಚಿವರ ತವರಲ್ಲಿ ಹಪ್ಪಳದಂತೆ ಎದ್ದು ಬಂದ ರಸ್ತೆ
5೦ ಲಕ್ಷ ವೆಚ್ಚದ ರಸ್ತೆ, ಕಿತ್ತ ಬಂತು ಕೇವಲ ಏಳೇ ದಿನಗಳಲ್ಲಿ
ಶಿವಮೊಗ್ಗದ ತೀರ್ಥಹಳ್ಳಿ ತಾಲ್ಲೂಕಿನ ಕಡೆಮನೆಯಲ್ಲಿ ಘಟನೆ.
ಬರಿಗೈಯಲ್ಲೇ ಹಪ್ಪಳದಂತೆ ರಸ್ತೆ ಕಿತ್ತ ಗ್ರಾಮಸ್ಥರು.
ನೆರಟೂರು ಗ್ರಾಪಂ ವ್ಯಾಪ್ತಿಯ ಕಡೆಮನೆ ಗ್ರಾಮ.
ಹೊರಣಿ ಗ್ರಾಮದ ಜಿಗಳಗೋಡಿನಿಂದ ಕಡೆಮನೆಗೆ ಸಂಪರ್ಕ ಕಲ್ಪಿಸುವ ರಸ್ತೆ.
ಎರಡು ಕಿಮೀ ಇರುವ ಈ ರಸ್ತೆ ಕಳೆದ ವಾರವಷ್ಟೇ ನಿರ್ಮಾಣ ಮಾಡಲಾಗಿತ್ತು.
28 ಮನೆಗಳಿರುವ ಕಡೆಮನೆ ಗ್ರಾಮ.
ಗೃಹ ಸಚಿವ ಆರಗ ಜ್ಞಾನೇಂದ್ರರವರ ಅನುದಾನದಲ್ಲಿ ನಿರ್ಮಾಣಗೊಂಡ ರಸ್ತೆ.
ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರನ ವಿರುದ್ಧ ಆಕ್ರೋಶ ಹೊರ ಕಾಕಿದ ಗ್ರಾಮಸ್ಥರು.
ಕಳಪೆ ಕಾಮಗಾರಿ ಮಾಡಿದ ಕೈಮರ ನಾಗೇಶ್ ಎಂಬ ಗುತ್ತಿಗೆದಾರ
ಈ ಬಗ್ಗೆ ಗುತ್ತಿಗೆದಾರ ನಾಗೇಶ್ ಗೆ ಮಾಹಿತಿ ನೀಡಿದ ಗ್ರಾಮಸ್ಥರು.
ಗುತ್ತಿಗೆದಾರ ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದ ಸ್ಥಳೀಯರು
ಕೇವಲ ಕಾಲು ಇಂಚು ಟಾರು ಹಾಕಿದ ಗುತ್ತಿಗೆದಾರ.
ಸ್ಥಳಕ್ಕೆ ಜಿಲ್ಲಾಧಿಕಾರಿ, ತಾಲೂಕು ಅಧಿಕಾರಿಗಳು ಬಂದು ಪರಿಶೀಲನೆ ಮಾಡುವಂತೆ ಆಗ್ರಹಿಸಿದ ಗ್ರಾಮಸ್ಥರು.
ಕೂಡಲೇ ಕಾಮಗಾರಿ ಸರಿಪಡಿಸದೇ ಇದ್ದರೆ ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ.
ಕಾಮೆಂಟ್‌ಗಳಿಲ್ಲ